![]() |
ಇದೆಲ್ಲ ಪುಕ್ಕಟ್ಟೆ ಪ್ರಚಾರಕ್ಕಾಗಿ.. ಟೀಂ ಇಂಡಿಯಾ ಗೆದ್ದರೆ ಬಟ್ಟೆಬಿಚ್ತಿನಿ ಅಂತಾ ಹೇಳಿ ದಿನಬೆಳ್ಗಾಗೊದ್ರೆಳ್ಗೆ ಸ್ಟಾರ್ ಪಟ್ಟಕ್ಕೇರಿದ್ದಳು ಮಾಡೆಲ್ ಪೂನಂ ಪಾಂಡೆ.. ಪೂನಂ ಕ್ರೀಡಾಸ್ಫೂರ್ತಿ ನೋಡಿ ದಂಗಾದ ಪಾಕ್ ಮಾಡೆಲ್ ವೀಣಾ ಮಲ್ಲಿಕ್, ಸೋಲಿನಿಂದ ಕಳೆಗುಂದಿರೋ ಪಾಕ್ ತಂಡಕ್ಕೆ ಜೀವತುಂಬಲು ಅರೆಬೆತ್ತಲಾಗ್ತಿನಿ ಅಂತಾ ಚಮಕ್ ಕೊಟ್ಟಿದ್ದಳು.. ಈಗ ಮಾಡೆಲ್ ಡಿಜೆ ಜೆನ್ನಿ ಸರದಿ..
ಬಡ ಹಾಕಿ ಆಟಗಾರರಿಗೆ ಆರ್ಥಿಕ ಸಹಾಯ ನೀಡಲು ಜೆನ್ನಿ ಬೆತ್ತಲಾಗ್ತಿದ್ದಾಳೆ..!!! ಈಗಾಗ್ಲೆ ಫೋಟೋಶೂಟ್ ಮುಗ್ದಿದೆ.. ಬಿಸಿಬಿಸಿ ಚಿತ್ರಗಳನ್ನ ಹರಾಜ್ ಹಾಕೋದ್ ಒಂದೇ ಬಾಕಿ.. ಹಜಾಜಿನಿಂದ ಸಂಗ್ರಹವಾಗೋ ಹಣವನ್ನ ಆಟಗಾರರಿಗೆ ಕೊಡ್ತಾಳಂತೆ. ಪುರುಷರ ಮ್ಯಾಗ್ಜಿನ್ ಒಂದು ಹಾಟ್ ಚಿತ್ರಗಳನ್ನ ಕೊಂಡ್ಕೊಂಡ್ ಬಿಸಿಬಿಸಿ ದೋಸೆಯಂತೆ ಸೇಲ್ ಮಾಡ್ಲಿಕ್ಕೆ ಲೆಕ್ಕಾಚಾರ ಹಾಕಿದೆ.. ಜೆನ್ನಿಗೆ 10ಲಕ್ಷ ಮುಂಗಡ ಹಣವನ್ನೂ ಕೊಟ್ಟಿದೆ..
ಏಷ್ಯನ್ ಟ್ರೋಫಿ ಗೆದ್ದ ಹಾಕಿ ಆಟಗಾರಿಗೆ ಪುಡಿಗಾಸು ಕೊಟ್ಟಿದ್ದು ಸರಿಯಲ್ಲ. ಕ್ರಿಕೆಟ್ ಆಟಗಾರರಿಗೆ ಕೋಟಿ ಕೋಟಿ ಕೋಡೋದು ಯಾವ್ ನ್ಯಾಯ ಅಂತೆಲ್ಲಾ ಮೈಮೇಲೆ ಬಂದೋವ್ರತರ ಆಡ್ತಿದ್ದಾಳೆ.. ಇಷ್ಟು ದಿನ ಸುಮ್ಮನಿದ್ದ ಜೆನ್ನಿ, ಇದ್ದಕ್ಕಿದ್ದಂತೆ ಹಾಕಿ ಸ್ಟಿಕ್ ಹಿಡ್ಕೊಂಡು ಗ್ರೌಂಡ್ಗೆ ಬರ್ಲಿಕ್ಕೆ ಕಾರಣ ಏನು..? ಸಹಾಯ ಮಾಡ್ಲಿಕ್ಕೆ ಬೆತ್ತಲೆನೇ ಆಗ್ಬೇಕಾ..? ಇದೆಲ್ಲ ಪ್ರಚಾರಕ್ಕಾಗಿ ಅನ್ನೋದು ಎಂಥಾ ದಡ್ಡನಿಗಾದ್ರು ಗೊತ್ತಾಗುತ್ತೆ.
ಒಂದೇ ಕಲ್ಲಿಗೆ ಎರಡ್ ಹಕ್ಕಿ ಹೊಡ್ದಿದ್ದಾಳೆ ಜೆನ್ನಿ. ಸಹಾಯದ ನೆಪದಲ್ಲಿ ಬೆತ್ತಲೆನಾಟಕ ಆಡಿ, ಪ್ರಚಾರಕ್ಕೆ ಮುನ್ನುಡಿ ಬರೆದಿದ್ದಾಳೆ.. ಒಂದ್ ಅರ್ಥದಲ್ಲಿ ಪೂನಂಗಿಂತ ಜೆನ್ನಿ ಬುದ್ಧಿವಂತೆ ಅಲ್ವಾ. ???
ವಿಷ್ಣು ಹೆಗಡೆ, ಕುಮಟಾ
