ಮುಂಜಾನೆಯ ಕನಸಿನಲಿ
ಮಬ್ಬಾದ ಬೆಳಕಿನಲಿ
ಮರೆಯಾದ ಮಾಯಾವಿ
ನೀನು - ನನ್ನ ಕನಸು ನೀನು
ಮೌನದೊಳು ಮಾತಾಗಿ
ಕನಸಿಗೆ ಸ್ಪೂರ್ತಿಯಾಗಿ
ಭಾವದೊಳು ಬಂಧಿಯಾದ ಭಾವ
ನೀನು-ನನ್ನ ಕನಸು ನೀನು
ಮುಸ್ಸಂಜೆಯ ತಂಗಾಳಿಯಾಗಿ
ಜೀವದಾ ಗೆಳತಿಯಾಗಿ
ಮನಕೆ ತಂಪೆರೆವ ಸಿಹಿಗಾಳಿ
ನೀನು - ನನ್ನ ಕನಸು ನೀನು
ವಿಷ್ಣು ಹೆಗಡೆ, ಕುಮಟಾ