ಹವ್ಯಾಸವೇ ಹಾಗೆ.. ಒಬ್ಬರಿಂದ ಒಬ್ಬರಿಗೆ ವಿಭಿನ್ನ. ಮನೆಯಲ್ಲಿ ನಾಯಿಯನ್ನೊ, ಬೆಕ್ಕನ್ನೊ ಸಾಕೋದು ಕಾಮನ್. ಕೆಲವರು ಒಂದ್ ಹೆಜ್ಜೆ ಮುಂದೆ ಹೋಗಿ ಹಾವು, ಚೇಳು, ಕೋತಿಗಳನ್ನ ಸಾಕ್ತಾರೆ..! ಇಂತ ತಿಕಲು ಪ್ರಾಣಿಪ್ರಿಯರನ್ನ ನೋಡಿ, ಆಶ್ಚರ್ಯವಾಗಿದೆ.. ಆದ್ರೆ, ನಾನು ಸದಭಿರುಚಿಯ ಹವ್ಯಾಸಿ..! ರೂಮಿನಲ್ಲೆ ಒಂದು ಚಿಕ್ಕ ಅಕ್ಚೇರಿಯಂ ಮಾಡಿದ್ದೇನೆ..!!
ಸುಮಾರು 15 ಲೀಟರ್ ನೀರು ಹಿಡಿಯೊ ಚಿಕ್ಕ ಟ್ಯಾಂಕ್ ಇದೆ. ಏಂಜಲ್, ಟೈಗರ್, ಲಯನ್ ಹೆಡ್, ವೈಟ್ ಅರೋನಾ.. ಹೀಗೆ ಹತ್ತಾರು ಜಾತಿಯ ಮೀನುಗಳಿವೆ.. ಅದ್ರಲ್ಲಿ ಗೋಲ್ಡ್ ಫಿಶ್ ಅಂದ್ರೆ ತುಂಬಾ ಪ್ರೀತಿ.. ಅವುಗಳ ಬಂಗಾರದ ದೇಹಕ್ಕೆ , ಹೊಳೆಯುವ ಕಣ್ಣುಗಳಿಗೆ ಎಂಥವರನ್ನ ಆಕರ್ಷಿಸುವ ಶಕ್ತಿ ಇದೆ.. ಕತ್ತಲಾದಾಗ ಅಕ್ವೇರಿಯಂ ಟ್ಯೂಬ್ ಲೈಟ್ ಆನ್ ಮಾಡಿದ್ರೆ ಸಾಕು ಗೋಲ್ಡ್ ಫಿಶ್ ಗಳ ಚಲ್ಲಾಟ ಬೆರಗುಗೊಳಿಸುತ್ತೆ.. ರೆಕ್ಕೆಯನ್ನ ಹಿಂದಕ್ಕೆ ಚಾಚುತ್ತಾ ಒಂದು ಕಡೆಯಿಂದ ಮತ್ತೊಂದು ಕಡೆಗೆ ಚಲಿಸುವುದನ್ನ ನೋಡೋದೆ ಮನಸ್ಸಿಗೆ ಮುದ.. ಒತ್ತಡದಿಂದ ರಿಲ್ಯಾಕ್ಷ್ ಆಗ್ಲಿಕ್ಕೆ ಅಕ್ವೇರಿಯಂ ಒಳ್ಳೆ ಮದ್ದು ಅಂತಾ ಸ್ನೇಹಿತ ಹೇಳಿದ ಮಾತನ್ನ ನೆನಪಿಸಿಕೊಂಡೆ.. ನಿಜ ಅನಿಸಿತ್ತು..
ಆದ್ರೀಗ ನನ್ನ ಮುದ್ದಿನ ಗೋಲ್ಡ್ ಫಿಶ್ ಇಲ್ಲ.. ಅದ್ರ ಪ್ರಾಣಪಕ್ಷಿ ಹಾರಿಹೋಗಿ ಒಂದುವಾರವೇ ಆಯ್ತು.. ಯಾಕೆ ಸತ್ತಿತು ಅಂತಾ ಯೋಚಿಸುತ್ತಲೆ ಇದ್ದೇನೆ.. ಸಾಯುವ ಕೆಲ ವಾರಗಳ ಮೊದ್ಲು ಲವಲವಿಕೆ ಕುಂಠಿತಗೊಂಡಿತ್ತು.. ಆಹಾರವನ್ನೂ ತಿನ್ನದೆ ಅಡ್ಡಾ-ದಿಡ್ಡಿಯಾಗಿ ಬಿದ್ದುಕೊಂಡಿತ್ತು. ಟ್ಯಾಂಕ್ ಕ್ಲೀನ್ ಮಾಡಿ, ನೀರು ಚೇಂಜ್ ಮಾಡಿದ್ರೆ ಸರಿಹೋಗಬಹುದು ಅಂದುಕೊಂಡೆ.. ವೈಟ್ ಸ್ಪಾಟ್ ಗೆ ಔಷಧವನ್ನೂ ಹಾಕಿದೆ.. ಆದ್ರೆ, ಬೆಳಗಾಗೋದ್ರೊಳ್ಗೆ ಸುತ್ತು, ಟ್ಯಾಂಕ್ ನಲ್ಲಿ ತೇಲುತ್ತಿತ್ತು.. ಆ ಮೀನಿನ ಸೊಬಗನ್ನ ನೋಡುತ್ತಿದ್ದ ನನಗೆ ಸಾವನ್ನೂ ನೋಡೊ ಪರಿಸ್ಥಿತಿ.. ದು:ಖ ತಡೆಯಲಾಗಲಿಲ್ಲ..
ವಿಷ್ಣು ಹೆಗಡೆ, ಕುಮಟಾ
