ಮಾಯಾವಿ
ಪ್ರಶಾಂತ ಮುಂಜಾವಿನಲಿ
ಕುಣಿಕುಣಿದು ಬಂದಳು
ಮನವ ತಣಿಸುವ ಶ್ವೇತಧಾರಿ ಸುಂದರಿ
ನಾ ಕಂಡ ಕನಸಿನಲಿ
ನೀಳ ನಾಸಿಕ, ಅಗಲ ಹಣೆ
ಆಳೆತ್ತರ ಅವಳ ದೇಹ
ನಗೆಯ ಬೀರಿದಳು
ಅತ್ತಿತ್ತ ನೋಡುತ
ಗಾಢ ನಿದ್ದೆಯೊಳೂ
ಗರಿಗೆದರಿತು ಮನೋಲ್ಲಾಸ
ಎಚ್ಚರವಾದಾಗ ಅಗೋಚರ
ಮಾಯವಾದಳು ಮಾಯಾವಿ
ಮತ್ತೇ ಬರಲೇ ಇಲ್ಲ ಆ ಸುಂದರಿ
ನಾ ಕಂಡ ಕನಸಿನಲಿ
ವಿಷ್ಣು ಹೆಗಡೆ, ಕುಮಟಾ