ಕ್ರೈಸ್ತ್
ಕಾಲೇಜಿನ ಒಳಗಡೆ ಹೋದ್ರೆ ಸಾಕು, ವಿಚಿತ್ರ ಸ್ಟೈಲ್ ಕಣ್ಣಿಗೆ ತಟ್ಟುತ್ತೆ. ಒಂದ್ ರೀತಿ,
ಲೇಟೆಸ್ಟ್ ಫ್ಯಾಶನ್ ಶೋ ರೂಮ್ ಅದು.. ಇಡಿ ಬೆಂಗಳೂರಿನ ಬಟ್ಟೆ ಅಂಗಡಿಗಳನ್ನ
ಸುತ್ತಾಡ್ರು, ಇದನ್ನೆಲ್ಲ ನೋಡ್ಲಿಕ್ಕೆ ಸಾಧ್ಯನೇ ಇಲ್ಲ ಬಿಡಿ.! ಏನುಂಟು, ಏನಿಲ್ಲ.
ಎಲ್ಲಾ ರೀತಿಯ, ಎಲ್ಲಾ ತರದ "ವೇಷ-ವಿಷೇಶಗಳ" ದರ್ಶನ ಒಮ್ಮೆಲೆ. ಮೊನ್ನೆ ಅಲ್ಲಿನ ಏಟಿಎಮ್ಗೆ ಹೋದಾಗ ತೀರಾ ವಿಚಿತ್ರ
ಅನಿಸಿದ್ದು,
ಡ್ರೆಸ್ ಗಳು.. ಈ ರೀತಿಯ ಸ್ಟೈಲ್ ಕೂಡಾ ಇದ್ಯಾ ಅಂತಾ ಗೊತ್ತಾಗಿದ್ದು ಅಂದೇ. ಕೆಲ
ಯುವತಿಯರು ಮೈಮೇಲೆ ಬಟ್ಟೆ ಹಾಕಿದ್ರು ಅನ್ನೊದೆ ಗೊತ್ತಾಗ್ತಿರ್ಲಿಲ್ಲ. ಅಷ್ಟು ಚಿಕ್ಕದು.
ಇವ್ರನ್ನ ನೋಡಿದ್ರೆ ಮಲ್ಲಿಕಾ ಶರಾವತ್ ಕೂಡಾ ಬೆಚ್ಚಿ ಬೀಳ್ತಿದ್ರು. ನಿಜಾಗ್ಲು ಒಂದ್
ತರ, ಶೂಟಿಂಗ್ ಸ್ಪಾಟ್ ಅದು.. ಭಿನ್ನ-ವಿಭಿನ್ನ ಕೇಶವಿನ್ಯಾಸ, ಲೇಟೆಸ್ಟ್ ಜೀನ್ಸ್- ಟೀ
ಶರ್ಟ್ ಗಳ ಕಾಂಬಿನೇಶನ್, ಸೆಲ್ವಾರ್-ಕುರ್ತಾಗಳ ಬೆಡಗು, ಲೋ ವೆಸ್ಟ್ ಜೀನ್ಸ್ ತೊಟ್ಟವರ
ವಯ್ಯಾರ.. ಇದನ್ನೆಲ್ಲ ನೋಡಿ ಸುಸ್ತು.. ಹುಡುಗಿರ ಮಾತ್ ಹಾಗಿರ್ಲಿ.. ಕೆಲ ಹುಡುಗರು
ಹುಡುಗಿಯರ "ಎದೆಗಾರಿಕೆಗೆ" ಸಮನಾಗಿ ನಿಲ್ಲುವ ಪ್ರಯತ್ನ ಮಾಡಿದಂತೆ ಕಾಣ್ತಿತ್ತು.
ತಾವೇನು ಕಮ್ಮಿ, "ತೋರಿಸೇ" ಬಿಡೋಣ ಅಂತಾ ಡ್ರೆಸ್ ಮಾಡಿಕೊಂಡು ಬಂದಿದ್ರು. ಲೋ ವೆಸ್ಟ್
ಜೀನ್ಸ್ ತೊಟ್ಟು ಉದ್ದೇಶಪೂರ್ವಕವಾಗಿ ಅಂಡರ್ವೇರ್ ಕಾಣೋತರ "ಲೋ ಸ್ಟೈಲ್" ಮಾಡಿದ್ರು..!
ಅಂಡರ್ವೇರ್ ಕಾಣಿಸ್ಬೇಕು ಅನ್ನೋದೆ ಅವ್ರ ಹಿಡನ್ ಅಜೆಂಡಾ. ಇದು ಎಂಥ ದಡ್ಡನಿಗಾದ್ರು
ಅರ್ಥ ಆಗ್ತಿತ್ತು..
ರಿಪ್ಪಡ್ ಜೀನ್ಸ್ ಭರಾಟೆಯೂ ಜೋರಾಗೆ ಇತ್ತು..( ಹರಿದ
ಜೀನ್ಸ್ ) ಜೋಗಿ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಹಾಕಿಕೊಂಡಿದ್ರಲ್ಲಾ ಅದೇ ರೀತಿ
ಜೀನ್ಸ್.. ಕೆಲವರು ಆ ಹರಿದ ಜೀನ್ಸ್ ಮತ್ತಷ್ಟು ಹರಿದುಕೊಂಡಿದ್ರು.. ಕೂದಲು
ಕೆದರಿತ್ತು. ಟೀ ಶರ್ಟ್ ಬನಿಯನ್ ಗಿಂತ ಚಿಕ್ಕದಿತ್ತು. ಆದಷ್ಟು ಎಕ್ಸ್ಫೋಸ್ ಮಾಡುವ
ಪ್ರಯತ್ನ..! ಇದೆಲ್ಲ ನೋಡಿದ್ರೆ, ಕಾಲೇಜುಗಳಲ್ಲಿ ವಸ್ತ್ರ ಸಂಹಿತೆ ಜಾರಿಯಾಗಬೇಕು ಅಂತಾ
ಅನಿಸದೆ ಇರದು..
ವಿಷ್ಣು ಹೆಗಡೆ, ಕುಮಟಾ

