Tuesday, April 2, 2013

ಸಂಗಾತಿ ಹುಡುಕಾಟದಲ್ಲಿ!

















ಕಲ್ಪನೆಯಲ್ಲಿ ರೂಪತಾಳಿದ
ಪದಗಳಿಂದ ಬಣ್ಣಿಸಲಾಗದ
ಚಿತ್ರಗಳಿಂದ ಚಿತ್ರಿಸಲಾಗದ
ಮಾಯಾಜಿಂಕೆಗಾಗಿ ಹುಡುಕಾಟ
ಇನ್ನೆಷ್ಟು ದಿನ ತೊಳಲಾಟ

ಕಾಣದಾಗಿದೆ ವೇದನೆ ನಿನಗೆ
ಹೊರಲಾಗದ ಭಾರ ಮನದೊಳಗೆ
ಸಹಿಸಲಾಗದ ಧಗೆ ಎದೆಯೊಳಗೆ
ಮೌನವೇ ಗತಿಯಾಗಿದೆ ನನಗೆ

ಎಲ್ಲೆಂದು ಹುಡುಕಲಿ ನಾ ನಿನ್ನ
ಬಂದು ಸೇರಲಾರೆಯಾ ನೀ ನನ್ನ
ಬದುಕಿನ ಇಳಿಸಂಜೆ ಮುನ್ನ

ವಿಷ್ಣು ಹೆಗಡೆ, ಕುಮಟಾ