Thursday, April 11, 2013

ನನ್ನೂರ ನೋಡಲು...


 











ಮಹಾನಗರಿಯ ಮಾಯಾ ಬದುಕು
ಬೇಸರ ತಂದಿರಲು
ಮಿಡಿಯುತಿದೆ ಮನವು 
ನನ್ನೋರ ಕಾಣಲು
ಹಿಂತಿರುಗುವ ದಿನವನು 
ಕಾಯುತಾ ನಿಂತೆನು
ನನ್ನೂರ ನೋಡಲು...

ಭಾವನೆಗಳ ಕಾಮನೆಗಳು
ಸಮುದ್ರದ ಅಲೆಗಳಂತೆ
ಉಕ್ಕಿ ಉಕ್ಕಿ ಹರಿಯುತಿದೆ
ಅಪ್ಪಳಿ ತವಕಿಸುತಿದೆ
ನನ್ನೂರ ನೋಡಲು...

ವಿಷ್ಣು ಹೆಗಡೆ, ಕುಮಟಾ